ಅರ್ಥದ ಮೊದಲ ಅರ್ಥವೇ ಅರ್ಥ!
ಇಲ್ಲಿ, ʼಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ...
ಇಲ್ಲಿ, ʼಕುತೋ ಧನಂʼ ಅನ್ನುವ ಮೂಲಕ, ಅರ್ಥ ಅನ್ನುವುದಕ್ಕೆ ಹಣ ಅನ್ನುವ ಆಶಯವೇ ಇದೆ. ಹಾಗಂತ, ೨೪ ಗಂಟೆಗಳ ಕಾಲವನ್ನೂ ...
“ಬ್ರಹ್ಮ ಮೀಮಾಂಸೆ”, “ಸಾಯುಜ್ಯಮುಕ್ತಿ”, “ಪರವಿದ್ಯೆ” ವಿಧದ ಶಬ್ದಾಡಂಬರದಿಂದಲೂ, “ಆಧಿದೈವಿಕ-ಆಧ್ಯಾತ್ಮಿಕ” “ಅಂಬರ”ದಿಂದಲೂ, ಈ ನಮ್ಮ ಭೌತಿಕ-ಜೈವಿಕ-ಮಾನವಿಕ “ಧರೆ”ಗಿಳಿದು, ಜೀರ್ಣ-ಸಂಕುಚಿತ-ಸಾಂಪ್ರದಾಯಿಕ ಮತಗಳ ಅಂಕೆಗಳನ್ನು ಹಾಯ್ದು, ಜ್ಞಾನದ ಎಲ್ಲೆಗಳನ್ನು ದಂಗಾಗಿಸುವಂತೆ ದೌಡಾಯಿಸಿ ದೂಡುತ್ತಿರುವ ವಿಜ್ಞಾನವನ್ನು ಸಂಗಾತಿಯಾಗಿಸಿಕೊಂಡು, ಇಹಲೌಕಿಕ, ಜೀವಂತ-ಜ್ವಲಂತ ಸಮಸ್ಯೆಗಳಿಗೆ ಮಿಡಿಯುವಂತೆಯೂ, ಸಮಾಜದ ತಳಮಟ್ಟವನ್ನು ಮುಟ್ಟುವಂತೆಯೂ, ಸಮಷ್ಟಿಯನ್ನೇ ತಬ್ಬಿಕೊಳ್ಳುವಂತೆಯೂ, ನಿಮ್ಮ ಮುಕ್ತ-ಉದಾತ್ತ ಆಲೋಚನೆಗಳು ಹೊಮ್ಮಿ ಹರಿಯಲಿ!
[ ತಾನು ಎನ್ನುವ ಅರಿವು ಜೀವದ ಕುರುಹು. ಅಮೀಬದಂಥ ಏಕಕೋಶ ಜೀವಿಯಿಂದ ಹಿಡಿದು, ಅತ್ಯಂತ ಸಂಕೀರ್ಣ ಮನುಷ್ಯನ ವರೆಗೂ, ತಾನು ಎನ್ನುವುದು ಬೇರೆ ಬೇರೆ ಸ್ತರದಲ್ಲಿ ಇದೆ. ಮನುಷ್ಯನಲ್ಲಿ ಅದು ಪರಾಕಾಷ್ಠತೆಗೆ ಏರಿದೆ. ಒಂದು ರೀತಿಯಲ್ಲಿ, ಅದು ಕರಾಳತೆಯ ಕಡೆಗೆ ಹೊರಳಿದೆ. ತನ್ನ ಬದುಕು ಉಳಿವಿಗಾಗಿ ಅಲ್ಲದೆ, ಪ್ರಾಣಿ ಪ್ರಾಣಿಗಳಲ್ಲಿ ಅಲ್ಲದೆ, ತಮ್ಮತಮ್ಮಲ್ಲೆ ಭೇದ ಭಾವಗಳನ್ನು ಕಲ್ಪಿಸಿಕೊಳ್ಳುತ್ತ, ಇತರರ ಜೀವನವನ್ನು ಹಾಳು ಮಾಡುವುದೆ ಗುರಿಯಾದಂತೆ ಕಾಣುತ್ತದೆ. ಪರರ ನಷ್ಟವೇ ತನ್ನ ಲಾಭ, ಪರರ ದುಃಖವೇ ತನ್ನ ಸುಖ, ಪರರ ಕ್ಷೋಭೆಯೆ ತನಗೆ ಶಾಂತಿ ಎನ್ನುವಂತಾಗಿದೆ. ಇದು ಹಿಂದಿನಿಂದಲೆ ಹತ್ತಿಕೊಂಡ ಪಿಡುಗು.
ದೂರವಾಣಿ "ಟ್ರಿನ್ ಟ್ರಿನ್" ಎಂದ ತಕ್ಷಣ "ಹಲೋ!" ಎನ್ನುವುದು ಸಾಮಾನ್ಯ. ಹಲೋ(ಹೆಲೋ hello) ಎಂದರೆ ಏನು? ಇದರ ಉತ್ಪತ್ತಿ ಹೇಗೆ? ಹಲೋ ಎನ್ನುವ ಶಬ್ದ ಬಳಕೆಯಲ್ಲಿ ಬಂದದ್ದು ಹೇಗೆ? ಇದನ್ನು ಕಂಡು ಹಿಡಿದವರು ಯಾರು? ಇದು ಅಚ್ಚಗನ್ನಡ ಪದವೆ? ಅಲ್ಲವಾದರೆ ಇದಕ್ಕೊಂದು ಅಚ್ಚಗನ್ನಡದ ಸಮಾನ ಪದ ಇದೆಯೆ?
ಶಿವ, ವಿಷ್ಣು, ಗಣೇಶ, ಪಾರ್ವತಿ, ಲಕ್ಷ್ಮಿ ಹೀಗೆ ನೂರೆಂಟು ದೇವರುಗಳು ಇದ್ದಾರಲ್ಲ, ಯಾರನ್ನು ಪೂಜಿಸಲಿ? - ಏಕಂ ಸತ್, ವಿಪ್ರಾ ಬಹುಧಾ ವದಂತಿ
[ ಸತ್ಯನಾರಾಯಣ ಅಂದರೆ ಯಾರು? ಉಳಿದ ನಾರಾಯಣರೆಲ್ಲ ಸುಳ್ಳು ದೇವರುಗಳೆ? ಈತ ವೇದ ಪುರಾಣಗಳಲ್ಲಿ ಇಲ್ಲ! ಹಾಗಾದರೆ ಈತ ಹುಟ್ಟಿಕೊಂಡದ್ದು ಹೇಗೆ? ಯಾವಾಗ? ನಿಜವೋ ಮೂಢ ನಂಬಿಕೆಯೋ, ಒಳ್ಳಯದೋ ಕೆಟ್ಟದ್ದೋ? ಈತ ವಿಷ್ಣುವೆ? ಕೋಟಿ ದೇವ-ದೇವತೆಗಳಲ್ಲಿ ಈತನ ಸ್ಥಾನ ಯಾವುದು? ಈತನ ಜನಪ್ರಿಯತೆಯ ಗುಟ್ಟೇನು? ಹೀಗೆ, ಹಾವನೂರರು ಈ ಲೇಖನದಲ್ಲಿ ಸತ್ಯನಾರಾಯಣನ ಸತ್ಯಾಸತ್ಯತೆಯನ್ನೆ ಕೆದಕಿ ನೋಡಿದ್ದಾರೆ. - ಸಂ.]
"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಇದರ ಸರಳ ಕನ್ನಡ ಅನುವಾದ ಇಲ್ಲಿದೆ, ಪದ್ಯರೂಪದಲ್ಲಿ.
ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲಿಂದ ಬಂದವು? ಒಳ್ಳೆಯವರು ಕೆಟ್ಟವರು ಹುಟ್ಟಿದ್ದಾದರೂ ಹೇಗೆ? ಒಂದೇ ಮನೆತನದಲ್ಲಿ ಅಣ್ಣತಮ್ಮಂದಿರಲ್ಲೆ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ. ಸಂಸ್ಕಾರ ಸಂಸ್ಕೃತಿ ಕೂಡ ಒಂದೇ. ಆದರೂ, ಯಾಕೆ ಹೀಗೆ ಎಂದು ಈ ಚೆನ್ನುಡಿ ವಿವರಿಸಬಲ್ಲುದೆ?
ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಲ್ಲವು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ?
ಭಾಷಾತಜ್ಞ ಮತ್ತು ಶಿಕ್ಷಕರಾದ ಕೆ.ಟಿ. ಗಟ್ಟಿ ಅವರ ಅನುಭವದ ಈ ಮಾತುಗಳು ಕನ್ನಡ ಕಲಿಗಳಿಗೆ ಇಂದೂ ಮಾರ್ಗದರ್ಶಿ ಆಗಿವೆ.