ವೈಚಾರಿಕ
ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು “ರೋಮಾಂಚಕ ದಿಗಂತಗಳು”
ಮೈಸೂರಿನ ಮಾನಸಗಂಗೋತ್ರಿಯ ತತ್ತ್ವಶಾಸ್ತ್ರ ಅಧ್ಯಯನ ಕೇಂದ್ರದವರು, ಸ್ನಾತಕೋತ್ತರ ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ “World Philosophy Day-2025” ಪ್ರಯುಕ್ತ
S. G. ಸೀತಾರಾಮ್
ಅವರು ಅಲ್ಲಿ ಮಂಡಿಸಿದ ವಾದದ ಧ್ವನಿ ಪ್ರಸ್ತುತಿ.
ಕಂಠದಾನ: Dr. H. ಪಾಂಡುರಂಗ ವಿಠಲ
ಆತ್ಮೀಯರೇ:
೧. ಮುಂದುವರೆಯುತ್ತಿರುವ ವಿಜ್ಞಾನ
ನಿಮ್ಮೆಲ್ಲರಿಗೂ “ದರ್ಶನ ದಿವಸ”ದ ಶುಭಾಶಯಗಳು! ಈಚೆಯ ವರ್ಷಗಳಲ್ಲಿ ಮಾನವನ ವೈಯಕ್ತಿಕ ಜೀವನದ ಮತ್ತು ಸಾಮಾಜಿಕ ವ್ಯವಸ್ಥೆಯ, ಮತ್ತು ಅದರಿಂದಾಚೆಗೂ, ಸಮಸ್ತ ಜೀವಕೋಟಿಯ ಮತ್ತು ಮೂಲತಃ ಸೃಷ್ಟಿಯ ಬುಡದಲ್ಲೇ ಅನೇಕ ದಿಕ್ಕುಗಳಿಂದಲೂ, ಕಾರಣಗಳಿಂದಲೂ ಉಂಟಾಗುತ್ತಿರುವ ಅಲ್ಲಕಲ್ಲೋಲಗಳೆಡೆಗೆ ಈ “ತತ್ತ್ವಚಿಂತನ ದಿನ”ದಂದು ನಾವು ನಮ್ಮ ಮನಸ್ಸನ್ನು ಹಚ್ಚುವುದು ಯುಕ್ತವಾಗಿದೆ. ಉದಾಹರಣೆಗೆ, ವರ್ತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಿಂದ ಸ್ಫೋಟಿಸುತ್ತಿರುವ, ಬೆಚ್ಚಿಸಿ ಬೆರಗಾಗಿಸುವಂಥ ಬೆಳವಣಿಗೆಗಳು, ಮನುಷ್ಯನ ಜೀವ ಮತ್ತು ಜೀವನದ ಮೇಲಷ್ಟೇ ಅಲ್ಲದೆ, ಸಮಗ್ರ ಪ್ರಕೃತಿಯ ಮೇಲೇ ಅಗಾಧ, ಮೂಲಭೂತ ಪರಿಣಾಮವನ್ನು ಬೀರುತ್ತಿವೆ.
೨. ಸ್ಪಂದಿಸದ ತತ್ವಶಾಸ್ತ್ರ - ತತ್ವಜ್ಞಾನಿ
ಅ. ವಿಜ್ಞಾನದ ವಿಕೃತ ಪ್ರಯೋಗಗಳು
ಈ ವಿಷಯವನ್ನೇ ಒಂದಿಷ್ಟು ಕೆದಕಿ ಇಣುಕಿದಾಗ, ಈಗೆರಡು ವರ್ಷಗಳ ಹಿಂದೆ ಲೌಕ್ಯಜನರಿಗೆ ಪರಿಚಿತವೇ ಇಲ್ಲದಂತಿದ್ದ “AI” ಎಂಬ “ಅಸ್ತ್ರ”ದಿಂದ ಇಂದು ಎಗ್ಗಿಲ್ಲದೆ ನುಗ್ಗುತ್ತಿರುವ ವಿಕೃತ ಪ್ರಯೋಗಗಳೂ, ಮತ್ತು social media ‘ಹರಟೆ ಚಾವಡಿ’ಗಳಲ್ಲಿ ತಂತ್ರಜ್ಞಾನದ ಅನಿಯಂತ್ರಿತ ದುರುಪಯೋಗಗಳೂ ಮಟ್ಟ ಮೊದಲು ಕೋರೈಸುತ್ತವೆ. ಇಂಥ ಉತ್ಪಾತಗಳು ಜನಕೋಟಿಗಳನ್ನು ಬಲು ಬೇಗನೆ ತಪ್ಪು ದಾರಿಗಳಿಗೆ ಎಳೆಯುತ್ತಿರುವುದೂ, ಅಂತೆಯೇ ನಮ್ಮ ಪರಿಸರದ ಮೇಲೆ ಅವ್ಯಾಹತವಾಗಿ ಅಧಿಕವಾಗುತ್ತಿರುವ ಅತ್ಯಾಚಾರಗಳೂ ಗಾಬರಿಯೇಳಿಸುತ್ತಿರುವಾಗ, ಅವುಗಳತ್ತ ನಮ್ಮ ತತ್ತ್ವಜ್ಞರಲ್ಲಿ ಯಾರೂ ಗಂಭೀರ ಚಿಂತನೆಗಳನ್ನು ಹರಿಸಿದಂತಾಗಲೀ, ವಿನೂತನ ವಿಚಾರಗಳನ್ನು ಮಂಡಿಸಿದಂತಾಗಲೀ ಕಂಡುಬರುತ್ತಿಲ್ಲ. ಐದು ವರ್ಷಗಳ ಹಿಂದೆ “ಕೋವಿಡ್” ಮಹಾಮಾರಿಯು ಮಾನವಜೀವಜಗತ್ತನ್ನೇ ನಡುಗಿಸಿದಾಗಲೂ, ನಮ್ಮ ತತ್ತ್ವಪಂಡಿತರಿಂದ ಚಿಂತನ-ಮಂಥನವಿರಲಿ, ಕನಿಷ್ಠ ಸ್ಪಂದನವೂ ಬರಲಿಲ್ಲ!
ಆ. ಯುದ್ಧ ಬೀತಿ
ಇನ್ನು ಈಗಂತೂ ಯುದ್ಧೋನ್ಮಾದವೂ, ಭಯೋತ್ಪಾದಕತೆಯೂ ನವನವೀನ, ಭೀಕರ ರೂಪಗಳನ್ನು ಪಡೆಯುತ್ತಿವೆ; ಅತೀವ ಅಧಿಕಾರ ದಾಹ ಮತ್ತು ಅಂತರ-ಮತೀಯ ದ್ವೇಷಗಳು, ವಿಶ್ವಾದ್ಯಂತ ರಾಜಕೀಯ-ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ವ್ಯೂಹಗಳ ಬೇರುಗಳನ್ನೇ ಸಡಿಲಗೊಳಿಸುತ್ತಿವೆ. ಕುಟುಂಬ ಪದ್ಧತಿಗಳು ಸೀಳಿ ಹೋಳಾಗುತ್ತಿವೆ. ನೈಸರ್ಗಿಕ ಸಂಪನ್ಮೂಲಗಳ ಹಿಂಸಾತ್ಮಕ ಶೋಷಣೆಯೂ, ಭೋಗಜೀವನ ಲಾಲಸೆಯೂ ತೀವ್ರಗೊಂಡು, ನಿಸರ್ಗವು ಸರ್ವನಾಶವಾಗುತ್ತಿದೆ; ಈ ಕಾರಣ ವಿಭಿನ್ನ ಜನಾಂಗಗಳ ನಡುವೆಯೇ ಅಲ್ಲದೆ, ಮಾನವ ಮತ್ತು ಸಹಜೀವಿಗಳ ನಡುವೆಯೂ ಸಂಘರ್ಷಗಳು ಉಲ್ಬಣಿಸುತ್ತಿವೆ.
ಇ. ವಿದ್ಯಾವಂತರಲ್ಲಿ ಮೂಢ ನಂಬಿಕೆಗಳು
ಇನ್ನೊಂದೆಡೆಯಲ್ಲಿ “ಬಹು ವಿದ್ಯಾವಂತ” ಎನಿಸಿಕೊಂಡವರೂ, ಮೂಢನಂಬಿಕೆಗಳಿಗೂ, ನಕಲಿ “ಗುರೂ-ಜೀ”ಗಳಿಗೂ, ಅರ್ಥಹೀನ-ವಿವೇಕಶೂನ್ಯ “ಆಚಾರ”ಗಳಿಗೂ ಅತಿರೇಕವಾಗಿ ಮಾರುಹೋಗುತ್ತಿದ್ದಾರೆ; “spiritual” ಎಂಬುದು ಕಟ್ಟಾ “ritual” ಆಗಿ ನಲುಗಿಹೋಗಿದೆ!
ಈ. ನಶಿಸುತ್ತಿರುವ ಗುಣಗಳು
Inquiry, rationality, free-thinking, truth-seeking, humanism ಮಾದರಿಯ ಅವಶ್ಯ ಗುಣಲಕ್ಷಣಗಳೇ ಈ ಪರಿಯಲ್ಲಿ ನಶಿಸಿ ನಾಪತ್ತೆಯಾಗುತ್ತಿರುವ, ಅಲ್ಲದೆ ಜೀವನ್ಮೌಲ್ಯಗಳೇ ಕರಗಿ ಕಣ್ಮರೆಯಾಗುತ್ತಿರುವ
೩. ಇಂದಿನ ಅವಸ್ಥೆ
ಈ ಅವಸ್ಥೆಯನ್ನು ನಮ್ಮ ತತ್ತ್ವವೇತ್ತರು ಆತಂಕದಿಂದ ಸಮೀಕ್ಷಿಸಬೇಕಲ್ಲವೇ? ನವೀಕೃತ ಜೀವನದರ್ಶನಗಳನ್ನು ಪಡೆದು, ವಿಮರ್ಶೆಗಳಿಗೂ ಬಿಚ್ಚಿಟ್ಟು, ಹೊಸತಾದ-ಹಸನಾದ ಮಾರ್ಗೋಪಾಯಗಳನ್ನು ತೋರಬೇಕಲ್ಲವೇ? ಭರದಿಂದ ಬದಲಾಗುತ್ತಿರುವ ವಿದ್ಯಮಾನಗಳು ಚಿತ್ರ-ವಿಚಿತ್ರ ಸವಾಲುಗಳನ್ನೊಗೆದು, ಒಂದರ ಮೇಲೊಂದು ಆಹ್ವಾನ-ಅವಕಾಶಗಳನ್ನು ’ಉದುರಿಸು’ತ್ತಿರುವ ಈ ಸಂಧಿಯಲ್ಲೂ, ಪ್ರಾಚೀನ ಕಾಲದ, ಪುರಾತನ ಸಮಾಜದ, ಅದರಲ್ಲೂ ಕೆಲವೇ ಆಯ್ದ, ಸೀಮಿತ- ಮತೀಯ, ಪರಸ್ಪರ-ವಿರೋಧಿ ಸಿದ್ಧಾಂತಗಳಷ್ಟನ್ನೇ ಸಾರ್ವತ್ರಿಕ, ಸಾರ್ವಕಾಲಿಕ, ಸತ್ಯಗಳೆಂದೂ, ಅವುಗಳ ಪ್ರವರ್ತಕರ ವಾದಗಳೇ ಪರಮಾರ್ಥಗಳೆಂದೂ, ಭಯ-ಭಕ್ತಿ-ನಿಷ್ಠೆಗಳಿಂದ ತಲೆಬಾಗಿ, ಭೂತಕಾಲಕ್ಕೇ ಜೋತುಬಿದ್ದು, ಇಂದಿಗೂ, ಮುಂದಕ್ಕೂ, ಹಿಂಡಿದ ಹಿಪ್ಪೆಯನ್ನೇ ಚಪ್ಪರಿಸುತ್ತ, ಜಳ್ಳನ್ನೇ ಮತ್ತೆ-ಮತ್ತೆ ಜಗಿದು, ಬಲವಂತವಾಗಿ ನುಂಗಿಕೊಳ್ಳುತ್ತ ಹೋದರೆ, ತತ್ತ್ವವಿಷಯ ವಿಕಾಸಕ್ಕೆ ಪುಷ್ಟಿ ಹೇಗೆ ದೊರೆತೀತು?
೪. ಹೊಸ ದೃಷ್ಟಿಕೋನಗಳು
ವಸ್ತುಸ್ಥಿತಿಗೆ ಬಂದರೆ, ಹೊರ ಪ್ರಪಂಚದಲ್ಲಿ ಇಂದಿನ ತತ್ತ್ವವಿಷಯ ಚರ್ಚೆಗಳು, ವಿಜ್ಞಾನ ವಿಚಾರಗಳನ್ನು, ಅದರಲ್ಲೂ “Mind and Consciousness” ಕುರಿತ ವೈಜ್ಞಾನಿಕ ಫಲಿತಾಂಶಗಳನ್ನು ಹೆಚ್ಚಾಗಿ ಬರಮಾಡಿಕೊಳ್ಳುತ್ತಿವೆ; ನೈತಿಕ ಚಿಂತನೆಗಳಲ್ಲೂ, ಸಾಮಯಿಕ- ಸಾಮಾಜಿಕ ಕಟುತಥ್ಯಗಳು ಹೆಚ್ಚಾಗಿ ಗಣ್ಯವಾಗುತ್ತಿವೆ; ಪರ್ಯಾವರಣ ವಿಷಯಗಳಂತೂ ಈಹೊತ್ತು ಎಂದಿಲ್ಲದ ಮಹತ್ತ್ವವನ್ನೂ, ಜರೂರನ್ನೂ ಪಡೆದುಕೊಂಡಿವೆ. ಪ್ರಚಲಿತ ನಿಜಸ್ಥಿತಿಯ ಬಗ್ಗೆ ನಾನಾ ಕ್ಷೇತ್ರಗಳ ಮೇಧಾವಿಗಳೂ, ಅನುಭಾವಿಗಳೂ ನವ್ಯ ದೃಷ್ಟಿಗಳನ್ನೂ, ಪ್ರೇರಕ ಕಲ್ಪನೆಗಳನ್ನೂ ಒದಗಿಸುತ್ತಿದ್ದಾರೆ; ಕ್ರಾಂತಿಕರ ಸಿದ್ಧಾಂತಗಳನ್ನು ಮುಂದಿಡುತ್ತಿದ್ದಾರೆ.:
- “Science and Eastern Mysticism” ಎರಡನ್ನೂ ಹದವಾಗಿ ಕಲಸಿ, ಅಣುಗಳಿಂದ ಹಿಡಿದು ಆಕಾಶಕಾಯಗಳವರೆಗೆ ಎಲ್ಲವೂ “Interconnected” ಎಂಬ ಘನಸತ್ಯವನ್ನು ವೈಜ್ಞಾನಿಕವಾಗಿ ಘೋಷಿಸುವ, ಹಾಗೆಯೇ ‘Deep Ecology” ವಿಚಾರವನ್ನೂ ಪ್ರಸ್ತಾವಿಸುವ Fritjof Capra;
- ಅದ್ಭುತ “Spiritual Environmentalism” ಸಂಗತಿಗಳನ್ನು ಪ್ರತಿಪಾದಿಸಿದ Jane Goodall; “
- "Reverence for Life” ಎಂಬ ಸಾರವಚನವನ್ನಿತ್ತ Albert Schweitzer;
- ಹಿಮಾಲಯದಲ್ಲಿ ಅಲೆದಾಡಿದ ಅನುಭವ-’ಅನುಭಾವ’ಗಳ ಮೇಲೆ Eco-spirituality ಎಂಬ ಸೋಜಿಗದ ಸಂಗತಿಯನ್ನು ವಿಶದಪಡಿಸುವ Stephen Alter
– ಹೀಗೆ ಅನೇಕ ಅಭಿನವ “ತತ್ತ್ವವಿಜ್ಞಾನಿ”ಗಳು ತಮ್ಮ ಅಂತಃಕರಣವನ್ನು ವಿಶ್ವಚೇತನಕ್ಕೆ “connect” ಮಾಡಿ, “electrify” ಆಗುವ ಆಳಕ್ಕೆ ಪಡೆದ ‘ಸಾಕ್ಷಾತ್ಕಾರ’ಗಳು ಇಂದು ಸವಿವರವಾಗಿ ಪ್ರಕಾಶಗೊಂಡಿವೆ.
ಇದೇ ಧಾಟಿಯಲ್ಲಿ ಮುಂದುವರಿದರೆ,
- Steven Pinker ಅವರ “Cognitive Science, Computationalism, Evolutionary Psychology, Psycholinguistics, Rationalism” ಇಂಥವೆಲ್ಲವೂ ಅಂತರ್ಗತವಾಗಿರುವ ವಿಲಕ್ಷಣ ತತ್ತ್ವವಿಚಾರ ಸಂಗಮ;
- Daniel Dennett ಅವರ “Philosophy of Mind, Philosophy of Science and Philosophy of Biology”, ಅದರಲ್ಲೂ “Evolutionary Biology and Cognitive Science-ಸಂಬಂಧಿತ” ಚಿಂತನಧಾರೆ;
- Peter Higgs ಅವರ “God particle”; Physics, Neurosciences, Anaesthesiology ಇತ್ಯಾದಿ ವಿಭಾಗಗಳ ಸಂಶೋಧನಾಗ್ರಣಿಗಳ “Quantum Consciousness”;
- Michio Kaku ಅವರ “Mathematical Philosophy”;
- Nassim Nicholas Taleb ಅವರ “Statistical Philosophy” (“Philosophy of Randomness”);
- Fritz Jahr, Albert Jonsen ಮುಂತಾದವರ “Bioethics, Eco-ethics, Clinical Philosophy & Medical Humanities (“Philosophy of Doctors”!);
- Jukka Varelius ಅವರ “Applied Ethics & Euthanasia Philosophy”;
- Alexander Bard ಅವರ “Cyber Philosophy (Syntheism, Netocracy)”;
- Paul Berg ಅವರ, “Genetic Engineering Philosophy”
– ಹೀಗೆ ಆಧುನಿಕ “ತತ್ತ್ವವಿದ-ಸಿದ್ಧಾಂತಿ-ನೈತಿಕತಾವಾದಿ” ವಿಶೇಷಜ್ಞರ ಒಂದು ವಿವಿಧ-ವಿಶಾಲ ಶ್ರೇಣಿಯನ್ನೇ ಇಲ್ಲಿ ಸೂಚಿಸುತ್ತ ಹೋಗಬಹುದು.
“ತತ್ತ್ವಾನ್ವೇಷಣೆಯ ಗುರಿಯು ‘ಸಾರ್ವತ್ರಿಕ ಸತ್ಯ’ವನ್ನು ಕಂಡುಹಿಡಿಯುವುದಲ್ಲ; ಆದರೆ, ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಾಯಕವಾಗುವಂತೆ, ವ್ಯಾವಹಾರಿಕ ಸಮಸ್ಯೆಗಳಿಗೆ ಪರಿಹಾರವನ್ನು ಪತ್ತೆಹಚ್ಚುವುದು” ಎಂದ Richard Rorty; “Artificial Intelligence, Biotechnology, Future of Humanity” ಮುಂತಾದ ಬಗೆಬಗೆಯ, ಮುಂಚೂಣಿಯ ಬೌದ್ಧಿಕ ಚಿಂತನೆಗಳಿಂದ ವಿಸ್ಮಯಗೊಳಿಸುವಂತೆ ವಿಚಾರಪ್ರಚೋದನೆ ಮಾಡುತ್ತಿರುವ ಬಹುಪ್ರತಿಭಾಶಾಲಿ Yuval Noah Harari, ಇವರನ್ನೂ ಈ ಪಟ್ಟಿಗೆ ಸೇರಿಸಬೇಕು.
೫. Philosopher and also Fellow-Sufferer
ಇಂತು ಉಕ್ಕಿಬರುತ್ತಿರುವ ನವೋದಿತ ಚಿಂತನೆಗಳನ್ನು, ತತ್ತ್ವಜ್ಞಾನಾರ್ಥಿಗಳಾದ ನೀವು ಪರಿಶೀಲಿಸುತ್ತ, ವಿಚಾರ ವಿನಿಮಯ ಮಾಡಿಕೊಳ್ಳುತ್ತ, ಉದ್ಭವಿಸುತ್ತಿರುವ ಸಂದೇಹಗಳಿಗೆ ಉತ್ತರಗಳನ್ನು ಹುಡುಕುತ್ತ ಹುರುಪಿನಿಂದ ಮುನ್ನಡೆಯಬಹುದು. ಮೇಲಾಗಿ, ನಿಜ ಜೀವನದಲ್ಲೂ, ಆಸ್ಪತ್ರೆಗಳು (ಅದರಲ್ಲೂ, Burns Wards & Post-mortem Theatres), ಕೊಳಚೆ ಪ್ರದೇಶಗಳು, ಅಲೆಮಾರಿ ಮಂದಿಯ ಕೊಂಪೆಗಳು, “ಕೆಂಪು ದೀಪ” ಕೇರಿಗಳು, ಭಿಕ್ಷುಕರ ವಸತಿಗಳು, ದೈಹಿಕ ಯಾ ಮಾನಸಿಕ ತೊಡಕಿರುವವರ ಸಹಾಯಕೇಂದ್ರಗಳು, ರುದ್ರಭೂಮಿಗಳು, ಕಾಡುಮೇಡು ಬುಡಕಟ್ಟುಗಳ ತಾಂಡಾಗಳು, ಪಶು-ಪಕ್ಷಿಗಳ ಕ್ರೂರ ಸೆರೆಮನೆಗಳು – ಇಂಥ ಕಠಿಣ ಜಾಗಗಳನ್ನು ನೀವು ಎಡತಾಕುತ್ತಿದ್ದರೆ, ಬಾಳಿನ ಹೋರಾಟವನ್ನು ಕುರಿತಂತೆ ಅಪೂರ್ವ-ಉಪಯುಕ್ತ ಒಳನೋಟಗಳನ್ನು ಪಡೆಯಬಹುದು (“ವೇದನೆ”ಯಿಂದ “ವೇದಾಂತ”!). ಈ ಸಾಹಸಿಕ ಸಂಚಾರದ ಕಡೆಯಲ್ಲಿ ನಿಮಗೆ ನಿಮ್ಮದೇ “ಬುದ್ಧ moment” ಪ್ರಾಪ್ತವಾಗಲೂಬಹುದು! ಅಲ್ಲದೆ “Philosopher” ಆಗುವುದರೊಂದಿಗೆ, “Fellow-sufferer” ಕೂಡ ಆಗಿ, ನೊಂದ ಜೀವಗಳಿಗೆ ಸಾಂತ್ವನವೀಯುವ ಸೇವಾವಕಾಶಗಳೂ ನಿಮಗೆ ಒದಗುವುವು. ಇಂಥ ಅನನ್ಯ ಅನುಭವಗಳಿಂದಾಗಿ ನಿಮ್ಮ ಸ್ವಂತ ಜೀವನಗಳೇ ಉನ್ನತವಾಗಬಹುದು. ಮೇಲಾಗಿ, ಪುಸ್ತಕ ರಚನೆ ಮತ್ತು ಲೇಖನಗಳಿಂದಲೂ, ಪದವಿ-ಪದೋನ್ನತಿಗಳಿಂದಲೂ ಆಚೆಗೆ, “Public Ethicist” ಎನಿಸಿಕೊಳ್ಳುವ ವಿಶಿಷ್ಟ ಮಟ್ಟವನ್ನೂ ಮುಟ್ಟಿ, ಸಮಾಜಕ್ಕೆ ಸನ್ಮಾರ್ಗದರ್ಶನ ನೀಡುವ ಸುಯೋಗವನ್ನೂ ನೀವು ಹೊಂದಬಹುದು.
೬. ಸ್ವತಂತ್ರ Philosopher ಆಗಿರಿ
ಆದ ಕಾರಣ, ಜೀವನದ ನಿಗೂಢತೆಯನ್ನು ನೀವು ಕುತೂಹಲದಿಂದ, ಸೂಕ್ಷ್ಮವಾಗಿ ಗಮನಿಸತೊಡಗಿರಿ; ಧೈರ್ಯದಿಂದ ಪ್ರಶ್ನೆಗಳನ್ನೆತ್ತಿರಿ; ಮತ್ತು ನಿಮ್ಮದೇ ಸಂಶೋಧನಾಧಾರಿತ-ತರ್ಕಸಮ್ಮತ ವಾದಗಳನ್ನು ನಿರೂಪಿಸಿ, ಪರಿಚರ್ಚೆಗಳಿಗೆ ತೆರೆದಿಡಿರಿ. ನೀವು ಪ್ರತಿಯೊಬ್ಬರೂ ಸ್ವತಂತ್ರ “Philosopher” ಎಂದೇ ತಿಳಿದು, ಸಮಾಜಹಿತಕ್ಕಾಗಿ, ಸರ್ವೋದಯಕ್ಕಾಗಿ, ನವೀನ ಆಲೋಚನೆಗಳ ಬೆಳಕನ್ನು ಹರಡಲು ಹುಮ್ಮಸ್ಸಿನಿಂದ ಹೊರಡಿರಿ.
೭. Philosophy ನಿಂತ ನೀರಾಗದಿರಲಿ
ನಿಜಕ್ಕೂ, ಚಿಂತನೆಗೆ ಎಲ್ಲೆಎಲ್ಲುಂಟು? ಒಟ್ಟು ಬದುಕೇ “ಫಿಲಾಸಫಿ-ಮಯ”ವಲ್ಲವೇ? “ಚಿದಂಬರ” ಅರ್ಥಾತ್ “ಚಿಂತನ ದಿಗಂತರ”ವೇ ತತ್ತ್ವವಿಚಾರಾಸಕ್ತರ ವಿಹಾರಕ್ಕಾಗಿ, “intellectual adventure” ಪ್ರಿಯರಿಗಾಗಿ ತೆರೆದು ಕಾದಿದೆ. ಜಿಜ್ಞಾಸೆ-ಅವಲೋಕನ-ಪರ್ಯಾಲೋಚನೆ-ಬೋಧನೆ ಯಾವುವೂ ನಿಂತ ನೀರಾಗದಿರಲಿ!
೮. ವಿಜ್ಞಾನ ನಿಮ್ಮ ಸಂಗಾತಿಯಾಗಲಿ - ಸಮಾಜಕ್ಕೆ ಒಳಿತಾಗಲಿ
“ಬ್ರಹ್ಮ ಮೀಮಾಂಸೆ”, “ಸಾಯುಜ್ಯಮುಕ್ತಿ”, “ಪರವಿದ್ಯೆ” ವಿಧದ ಶಬ್ದಾಡಂಬರದಿಂದಲೂ, “ಆಧಿದೈವಿಕ-ಆಧ್ಯಾತ್ಮಿಕ” “ಅಂಬರ”ದಿಂದಲೂ, ಈ ನಮ್ಮ ಭೌತಿಕ-ಜೈವಿಕ-ಮಾನವಿಕ “ಧರೆ”ಗಿಳಿದು, ಜೀರ್ಣ-ಸಂಕುಚಿತ-ಸಾಂಪ್ರದಾಯಿಕ ಮತಗಳ ಅಂಕೆಗಳನ್ನು ಹಾಯ್ದು, ಜ್ಞಾನದ ಎಲ್ಲೆಗಳನ್ನು ದಂಗಾಗಿಸುವಂತೆ ದೌಡಾಯಿಸಿ ದೂಡುತ್ತಿರುವ ವಿಜ್ಞಾನವನ್ನು ಸಂಗಾತಿಯಾಗಿಸಿಕೊಂಡು, ಇಹಲೌಕಿಕ, ಜೀವಂತ-ಜ್ವಲಂತ ಸಮಸ್ಯೆಗಳಿಗೆ ಮಿಡಿಯುವಂತೆಯೂ, ಸಮಾಜದ ತಳಮಟ್ಟವನ್ನು ಮುಟ್ಟುವಂತೆಯೂ, ಸಮಷ್ಟಿಯನ್ನೇ ತಬ್ಬಿಕೊಳ್ಳುವಂತೆಯೂ, ನಿಮ್ಮ ಮುಕ್ತ-ಉದಾತ್ತ ಆಲೋಚನೆಗಳು ಹೊಮ್ಮಿ ಹರಿಯಲಿ! ನಿಮ್ಮ ಜ್ಞಾನಮಾರ್ಗವು ಬರಿಯ ಚರಿತ್ರೆಗಳಿಂದಾಚೆಗೆ, ಭೂಗೋಳವನ್ನೂ, ಅಷ್ಟೇಕೆ, ಖಗೋಳವನ್ನೇ ಆವರಿಸಲಿ! ಭವಿಷ್ಯದೊಳಗೂ (ಉದಾ: ಚಂದ್ರನ ಮೇಲೆ ಉಗಮಿಸಬಹುದಾದ “Technological Lunar Civilization” ನಿಟ್ಟಿಗೂ!) ಇಣುಕಲಿ! ನಿಮ್ಮ ಸದಾಲೋಚನೆಗಳಿಂದ ನಿಮಗೂ, ಸಮಾಜಕ್ಕೂ ಸದಾ ಒಳಿತಾಗಲಿ, ಸಂತಸವಾಗಲಿ!
Translated into English with the help of Google from the original Kannada text
Some “Exciting Horizons” for Contemporary Philosophy
A sound presentation of the argument presented by
S. G. Seetharam, Mysore,
at the Department of Postgraduate Philosophy Studies there on the occasion of “World Philosophy Day-2025”.
Vocals: Dr. H. Panduranga Vitthal
------------
Dear friends:
1. Developing Science Happy “Darshan Divas” to all of you! On this “Philosophical Reflection Day”, it is appropriate for us to focus our minds on the upheavals that have been occurring in the human individual life and social system, and beyond that, in the entire ensemble of life forms, and basically at the root of creation, from many directions and causes. For example, the shocking and astonishing developments that are exploding in the fields of science and technology in the present day are having a profound and fundamental impact not only on the life and livelihood of man, but also on the entire nature.
2. Stoic Philosophers a. Abuses of Science When we dig into this matter a little, we see that the perverse experiments that are now being carried out with the “weapon” called “AI”, which was unknown to the common people two years ago, and the uncontrolled misuse of technology in social media ‘chat rooms’ are becoming more and more common. While such products are rapidly leading millions of people astray, and the unabated increase in violence against our environment is alarming, it is not seen that any of our philosophers have given them serious thought or presented any new ideas. Even when the “Covid” pandemic shook the human world five years ago, there was not even a thought or a stir from our philosophers!
b. War and terrorism Even now, war mania and terrorism are taking new and terrible forms; The excessive thirst for power and inter-religious hatreds are loosening the very roots of political-economic-social-cultural systems worldwide. Family systems are being torn apart. The violent exploitation of natural resources and the lust for pleasure are intensifying, and nature is being destroyed; due to this, conflicts are escalating not only between different races, but also between humans and their symbiotes.
c. Superstitious and Educated! On the other hand, even those who consider themselves “highly educated” are being excessively seduced by superstitions, fake “gurus-jis”, and meaningless and senseless “rituals”; “spiritual” has become a rigid “ritual”!
d. Disappearing Qualities Shouldn't our philosophers examine this situation with concern, where essential qualities such as inquiry, rationality, free-thinking, truth-seeking, and humanism are being destroyed and disappearing, and the values of life are being dissolved and disappearing?Shouldn't they adopt renewed philosophies of life, expose them to criticism, and show new and beautiful ways and means?
3. Current State Even in this era when rapidly changing phenomena are posing strange challenges and ‘throwing’ one invitation and opportunity after another, if we bow our heads out of fear, devotion and loyalty, clinging to the past, considering only the few selected, limited, and contradictory theories of ancient times and ancient societies as universal, eternal, truths, and the arguments of their proponents as the ultimate meanings, and continue to beat the dead horse and chew the hollow straw again and again, and forcibly swallowing it, how can we find nourishment for the development of philosophy?
4. New Viewpoints In reality, today's philosophical discussions in the outside world are increasingly adopting scientific ideas, especially scientific results on “Mind and Consciousness”; In moral thought, contemporary and social issues are becoming increasingly important; environmental issues have also assumed unprecedented importance and urgency. Intellectuals and experts from various fields are providing fresh perspectives and inspiring ideas about the current reality; they are putting forward revolutionary theories:
- Fritjof Capra, who, mixing “Science and Eastern Mysticism” , scientifically declares the solid truth that everything from atoms to celestial bodies is “interconnected”, and also proposes the idea of ‘Deep Ecology’;
- Jane Goodall, who asserts the amazing facts of “Spiritual Environmentalism”;
- Albert Schweitzer, who utters the epitome of “Reverence for Life”;
- Stephen Alter”, who explains the delicate fact of “Eco-spirituality” based on the experiences he has experienced while wandering in the Himalayas
Thus, the ‘realizations’ of many innovative “philosophers” who have “connected” their inner selves to the universal consciousness and gained the depth of “electrification” have been published in detail today.
Continuing in this vein:
-Steven Pinker is a unique philosophical confluence that encompasses all of these - Cognitive Science, Computationalism, Evolutionary Psychology, Psycholinguistics, Rationalism;
- Daniel Dennett's "Philosophy of Mind, Philosophy of Science and Philosophy of Biology", especially "Evolutionary Biology and Cognitive Science-related" thinking;
Peter Higgs' "God particle"; "Quantum Consciousness" of research papers in Physics, Neurosciences, Anaesthesiology, etc.;
- "Mathematical Philosophy" by "Michio Kaku";
- "Statistical Philosophy" by "Nassim Nicholas Taleb" ("Philosophy of Randomness");
- "Bioethics, Eco-ethics, Clinical Philosophy & Medical Humanities" ("Philosophy of Doctors"!) by Fritz Jahr, Albert Jonsen et al.;
- "Applied Ethics & Euthanasia Philosophy" by Jukka Varelius;
- "Cyber Philosophy (Syntheism, Netocracy)" by Alexander Bard;
- "Genetic Engineering Philosophy" by "Paul Berg";
Thus, one can go on indicating a diverse and wide range of modern "philosopher-ideologist-moralist" specialist here.
“The goal of philosophy is not to find ‘universal truth’; but to find solutions to practical problems that help build a better society,” said Richard Rorty; Yuval Noah Harari who is thought-provoking with various cutting-edge intellectual ideas such as “Artificial Intelligence, Biotechnology, Future of Humanity” should also be added to this list.
5. Philosopher and also Fellow-Sufferer You, as philosophers, can vigorously move forward by examining the emerging new ideas, exchanging ideas, and seeking answers to the doubts that arise. Moreover, in real life, hospitals (especially Burns Wards & Post-mortem Theatres), slums, homeless shelters, “red light” camps, beggars’ homes, mental and physical rehabilitation centres, cemeteries, tribal camps, cruel prisons for animals and birds – if you venture into such harsh places, you can gain unique and useful insights into the struggle of life (“Vedana” becomes “Vedanta”!). You may even have your own “Buddha moment” on this adventurous journey! Besides becoming a “Philosopher”, you will also be given the opportunity to serve and comfort suffering souls by becoming a “Fellow-sufferer”. Your own lives can be elevated by such unique experiences. Moreover, beyond writing books and articles, and degrees and promotions, you can also have the privilege of reaching the unique level of being a “Public Ethicist” and providing sound guidance to society.
6. Be an Independent Thinker Therefore, begin to observe the mystery of life with curiosity and sensitivity; ask questions with courage; and present your own research-based and logical arguments and open them up for discussions. Each of you, knowing yourself to be an independent “Philosopher”, set out with enthusiasm to spread the light of new ideas for the benefit of society, for the enlightenment of all.
7. May Philosophy not become stangnat water Indeed, where is the limit for thought? Isn’t the whole life “philosophical”? “Chidambara” i.e. “Thought Horizon” is open and waiting for the lovers of philosophy, for the lovers of “intellectual adventure”. Let no question of curiosity, observation, reflection, or teaching become a stagnant water!
8. May Scinece become your Companion From the rhetoric of “Brahma Mimamsa”, “Sayujya mukti”, “Paravidya”, and from the “divine and spiritual” sky, descend to our physical-biological-human “ground”, break through the barriers of narrow-minded-traditional beliefs, and take science as your companion, rushing to overthrow the boundaries of knowledge, and let your free and noble thoughts flow forth, touching the worldly, living and burning problems, touching the bottom level of society, and embracing the whole! May your path of knowledge go beyond mere histories, covering the globe, and even the sky! Peek into the future (e.g., the “Technological Lunar Civilization” that could emerge on the moon!)May your good thoughts always bring you and society good and happiness!
(Voice Sapna Chikkomala, (india kannada female), Speed 150%)
ಕನ್ನಡ ಕಲಿ ಬಿತ್ತರಿಕೆ, ಕನ್ನಡದ ಗುಟ್ಟು, ಡಿಸೆಂಬರ್ ೨೫,, ೨೦೨೫,
ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ, ಕೆಲವು “ರೋಮಾಂಚಕ ದಿಗಂತಗಳು”
ಭಾಷಣ: ಎಸ್. ಜೀ ಸೀತಾರಾಮ್
ಕಂಠದಾನ:, ಡಾಕ್ಟರ್ ಹೆಚ್. ಪಾಂಡುರಂಗ ವಿಠಲ
ಸಂಪರ್ಕ:, ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್
ಡಿಸೆಂಬರ್ ೨೫,, ೨೦೨೫.
Youtube chapter timings
00:00 Teaser
00:24.00 Title
00:54.5 ೧. ಮುಂದುವರೆಯುತ್ತಿರುವ ವಿಜ್ಞಾನ
01:42.50 ೨. ಸ್ಪಂದಿಸದ ತತ್ವಶಾಸ್ತ್ರ - ತತ್ವಜ್ಞಾನಿ
02:45.50 ಆ. ಯುದ್ಧ ಬೀತಿ
03:28.5 ಇ. ವಿದ್ಯಾವಂತರಲ್ಲಿ ಮೂಢ ನಂಬಿಕೆಗಳು
03:47.5 ೩. ನಶಿಸುತ್ತಿರುವ ಗುಣಗಳು
04:05.5 ೩. ಇಂದಿನ ಅವಸ್ಥೆ
05:03.5 ೪. ಹೊಸ ದೃಷ್ಟಿಕೋನಗಳು
09:10.5 ೫. Philosopher and also Fellow-Sufferer
10:53.5 ೬. ಸ್ವತಂತ್ರ Philosopher ಆಗಿರಿ
11:22.0 ೭. Philosophy ನಿಂತ ನೀರಾಗದಿರಲಿ
11:48.0 ೮. ವಿಜ್ಞಾನ ನಿಮ್ಮ ಸಂಗಾತಿಯಾಗಲಿ

ಏನಂತೀರಿ?