ಕನ್ನಡ ಕಲಿ ಬೆಳ್ಳಿ ಹಬ್ಬ
Kannada Kali Silver Jubilee Celebration
April 18, 2026 2:00-6:00pm, Sanatana Dharama Temple
ಆಮಂತ್ರಣ Invitation
Register for Games & Activities
Poetry Challenge
Send your Articles for Souvenir
ನಮೋಽಽ ಕನ್ನಡ ಕಲಿಗಳೆ,
ಇಪ್ಪತ್ತೈದು (೨೫) ವರ್ಷಗಳ ಹಿಂದೆ ಅರ್ವೈನ್ ನಗರದಲ್ಲಿ ಹೊತ್ತಿಕೊಂಡ ಜ್ಯೋತಿ ಇಂದು ಸಾವಿರಾರು ಹೃದಯಗಳಲ್ಲಿ ಬೆಳಗುತ್ತಿರುವ ಕನ್ನಡ ಕಲಿಯ ನಂದಾದೀಪವಾಗಿದೆ. ಒಂದು ಶಾಲೆಯಿಂದ ಆರಂಭವಾದ ಪಯಣ ಐದು ಶಾಲೆಗಳಾಗಿ ಅರಳಿ, ನೆರೆ ರಾಜ್ಯಗಳಿಗೆ ಹರಡಿ, ದೇಶದ ತುಂಬ ಬೆಳಗಿ, ಇಂದು ಪ್ರಪಂಚದ ನಾನಾ ಮೂಲೆಗಳಲ್ಲಿ ಕನ್ನಡದ ನಾದವಾಗಿ ಮೊಳಗುತ್ತಿದೆ.
ಪರಕೀಯ ನೆಲೆಯಲ್ಲಿದ್ದರೂ ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಹೃದಯಕ್ಕೆ ಹತ್ತಿರವಾಗಿರುವುದು ನಿಮ್ಮ ಕನ್ನಡ ಪ್ರೀತಿ, ನಿಮ್ಮ ಕನ್ನಡ ಅಭಿಮಾನ, ನಿಮ್ಮ ನಿಸ್ವಾರ್ಥ ಸೇವೆಯ ಫಲ. ಈ ಸಾಧನೆ ನಮ್ಮೆಲ್ಲರದು. ನಮ್ಮ ಒಗ್ಗಟ್ಟಿನದು. ನಮ್ಮ ಹೆಮ್ಮೆಯದು.
ಬನ್ನಿ—ಕನ್ನಡ ಕಲಿಯ ಬೆಳ್ಳಿ ಹಬ್ಬ, Silver Jubileeಯನ್ನು ಏಪ್ರಿಲ್ ೧೮ರಂದು ಆಚರಿಸೋಣ, ಎಲ್ಲರೂ ಸೇರಿ ಸಂಭ್ರಮಿಸೋಣ.
ಈ ಕನ್ನಡ ಪಯಣದ ಸವಿಯನ್ನು ನೆನಪಿಸಿಕೊಳ್ಳೋಣ. ಮಕ್ಕಳ ನಗು-ನಲಿವುಗಳ ಕನ್ನಡ ಆಟಗಳನ್ನು ಆನಂದಿಸೋಣ— ಅಕ್ಷರ-ಪದಗಳ ಚೆಲ್ಲಾಟ, ವೇಗ-ಪಠಣ, ಆಶುಭಾಷಣ, ಚಿತ್ರಕತೆ, ಮಾತು-ವೇಷ, ಜೆಪರ್ಡಿ, ಸಂವಾದ, ಕವನ ವಾಚನ … ಇತ್ಯಾದಿ. ಕನ್ನಡದ ಮಧುರತೆಯನ್ನು ಮಕ್ಕಳ ಧ್ವನಿಯಲ್ಲಿ ಮತ್ತೆ ಕೇಳೋಣ.
ನಿಮ್ಮ ಮಕ್ಕಳು ಖಂಡಿತವಾಗಿ ಭಾಗವಹಿಸಲಿ. ನಿಮ್ಮ ಫೋಟೋ/ವಿಡಿಯೋಗಳ ಜೊತೆಗೆ, ನಿಮ್ಮ ಕನ್ನಡ ಕಲಿಯ ಪಯಣದ ನೆನಪುಗಳನ್ನು ಹಂಚಿಕೊಳ್ಳಿ— ಅವೆ ಈ ಹಬ್ಬದ ಸಿಂಗಾರಕ್ಕೆ ನಿಜವಾದ ಆಭರಣಗಳು.
https://kannadakali.com/silverjubilee ಯಲ್ಲಿ ನಿಮ್ಮ ಮತ್ತು ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಿ.
ಮತ್ತೊಮ್ಮೆ, ಕನ್ನಡ ಕಲಿಯ ಬೆಳ್ಳಿ ಹಬ್ಬಕ್ಕೆ ಎಲ್ಲ ಕನ್ನಡಿಗರಿಗೂ ಹೃತ್ಪೂರ್ವಕ ಆಮಂತ್ರಣ.
ಬನ್ನಿ—ಸಂಭ್ರಮಿಸೋಣ, ನೆನಪಿಸಿಕೊಳ್ಳೋಣ, ಹೆಮ್ಮೆಪಡೋಣ, ಮುನ್ನಡೆಯೋಣ.
ಕೊಂಡಿಗಳು Links
Register
Register yourself and participating children for various games and activities
Volunteer
Volunteer in various areas we need help in planning before and on the day
Photos and Videos
Do you have photos and videos of Kannada Kali activities in the past 25 years? We need them! May be you were a parent, teacher, student, coordinator, or an attendee. Please share, preferably, links to your albums with [email protected] If it is just a few photographs you may email them.
Poetry Challenge
Let your imagination fly! You are challenged to write Kannada poems. There is NO LIMIT on the subject, lines, number of submissions, or who can submit. Send your literary gems to [email protected]
For more information and example poems see poetry chalenge details.
Souvenir Magazine
Send your articles and poems to [email protected] Though your submissions may be on any topic, articles relating to your experience with Kannada Kali, Kannada language, Kannada Culture are preferred.
Contacts for more details
ಕನ್ನಡ ಕಲಿ : ವಿಶ್ವೇಶ್ವರ ದೀಕ್ಷಿತ, ಜಯರಾಮ್ ರಾವ್, ವಿಜಯ್ ಕೊಪ್ಪರಮ್, ಪ್ರತಿಭಾ ಭಾಗವತ
ನುಡಿ ಕನ್ನಡ ಶಾಲೆ, ಅರ್ವೈನ್ : ದೀಪಾ ಶೇಷಾದ್ರಿ, ಶಶಿ ಬಸವರಾಜು, ಕುಸುಮಾ, ರಘು ಕುಲಕರ್ಣಿ
ಸರಿತೊಸ ಕನ್ನಡ ಶಾಲೆ : ಗುರುಪ್ರಸಾದ್
ವ್ಯಾಲಿ ಕನ್ನಡ ಕಲಿ (VKK) : ಸಂಜಯ, ಸ್ಮಿತಾ ರಂಗಸ್ವಾಮಿ
ಆರೆಂಜ್ ಕೌಂಟಿ ಕನ್ನಡ ಶಾಲೆ : ಸುಮಂತ ಗೌಡ, ಕವನಾ ಕುಂದಾಪುರ, ರೂಪಾ ಸುಭಾಶ್, ಅಮರ, ಶ್ರೀಧರ ರಾಜಣ್ಣ
ಬೆಳಕು ಕನ್ನಡ ಶಾಲೆ : ರಾಜೀವ ಸೀತಾರಾಮ್, ಪ್ರಮೀಳಾ
ತಾಗುಲಿ: Rain, Sky, gods, worship

ಏನಂತೀರಿ?