ಬರೆಹ

Articles

ಕ್ಲಿಕ್ ಕ್ಲಿಕ್ ಗಣಕಪ್ಪ - ಕನ್ನಡ ಪದ್ಯ ಪಾಠ

ಕನ್ನಡ ಪದ್ಯ ಪಾಠ

ಕ್ಲಿಕ್‌ ಕ್ಲಿಕ್‌ ಗಣಕಪ್ಪ

ಇನ್ನೇನು ಬೇಸಿಗೆ ರಜೆ ಮುಗಿಯುತ್ತ ಬಂತು. ಶಾಲೆಯ ಹೊಸ ವರ್ಷ ಆರಂಭ. ಎಲ್ಲರಿಗೂ ಹಿಗ್ಗೋ ಹಿಗ್ಗು! ಮತ್ತೆ ಮೆಚ್ಚಿನ ಟೀಚರರ ಪಾಠ, ಹಳೆ ಗೆಳೆಯರ ಜೊತೆ ಆಟ; ಹೊಸ ಗೆಳೆಯರು, ಹೊಸ ಪುಸ್ತಕಗಳು, ಹೊಸ ಬಟ್ಟೆಗಳು ಎಲ್ಲಕ್ಕೂ ಹೊಸ ಹುರುಪು. ಈಗಂತೂ, ಹೊಸ ತರಗತಿಗೆ, ಹೊಸ ಗಣಕವನ್ನು ಕೊಳ್ಳುವುದು‌ ಸಾಮಾನ್ಯ ಆಗಿದೆ. ಗಣಕ ಅಂದರೆ ಕಂಪ್ಯೂಟರು, ಲ್ಯಾಪ್‌ ಟಾಪು, ಅಥವ ಟ್ಯಾಬ್ಲೆಟ್ಟು; ಎಷ್ಟೋ ಅಪ್‌ ಗಳನ್ನು ಅಳವಡಿಸಿಕೊಳ್ಳಬಹುದಾದ ಮೊಬೈಲ್‌ ಫೋನು ಕೂಡ ಆಗಬಹುದು. ಹೀಗೆ ಒಂದು ಗಣಕವನ್ನು ನಮ್ಮ ಪುಟ್ಟುವಿಗೆ ಅಪ್ಪ ಅಮ್ಮ ಕೊಡಿಸಿದಾಗ ಏನಾಯ್ತು? ಅವನು ಕಲಿತ ಪಾಠ ಏನು?

ಕಾಲ: ಪ್ರಕಿರಿತ ಪ್ರಜ್ಞಾನ

[ ಕಾಲ ಎಂದರೆ ಸದಾ ಉರುಳುತ್ತಿರುವ, ಮುನ್ನಡೆಯುತ್ತಿರುವ, ಮತ್ತು ಕಳೆಯುತ್ತಿರುವ ಸಮಯ, ಎಲ್ಲವನ್ನೂ ಆವರಿಸಿರುವ ವಿಷ್ಣು, ಎಲ್ಲವನ್ನೂ ಮೀರಿರುವ ಎಲ್ಲಕ್ಕೂ ಮೂಲ ಪರಮಾತ್ಮ ಶಿವ, ಅವ್ಯಕ್ತದಿಂದ ಹೊಡಕರಿಸಿದ ಕೃಷ್ಣ, ಮತ್ತು ಕಪ್ಪು ಎನ್ನುವ ಸಾಮಾನ್ಯ ಅರ್ಥಗಳು. ಶಿವ ಎಂದರೆ ಶುಭ್ರ, ಬಿಳಿ ಕೂಡ.
"ನೀ ಯಾರು ಹೇಳು" ಎಂದು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ್ದು, " ಕಾಲೋಽಸ್ಮಿ, ಲೋಕಕ್ಷಯಕೃತ್ಪ್ರವೃದ್ಧಃ, ಲೋಕಗಳನಳಿಸುವ ಮಹಾನ್ ಕಾಲ ನಾನು."

ಮನ್ವಂತರದ ಮನುಜೆ: ಮೇರಿ ಕ್ಯೂರಿ

ನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ.

ಬರವಣಿಗೆಯಲ್ಲಿ ಮತ್ತು ಉಚ್ಚಾರದಲ್ಲಿ ಭಾಷಾ ಶುದ್ಧಿಯ ವಿಚಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಕೆ.ಟಿ. ಗಟ್ಟಿ ಚಿಂತನಶೀಲ ಬರಹಗಾರರು. ಭಾಷೆಯ ಕಲಿಕೆ, ಉಳಿವು, ಅಳಿವು, ಮತ್ತು ಬೆಳವಣಿಗೆಗಳಲ್ಲಿ ಇವರಿಗೆ ಆಸಕ್ತಿ. ಕಾದಂಬರಿ, ಕಥೆ, ಕವನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ ಐವತ್ತಕ್ಕು ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹದಿನೇಳನೆಯ ವಯಸ್ಸಿನಲ್ಲೆ ಅಧ್ಯಾಪಕರಾಗಿ ಸುಮಾರು ನಲವತ್ತು ವರ್ಷಗಳ ಅನುಭವ ಹೊಂದಿದ್ದಾರೆ. ಆದನ್ನೆ ಈಗ ಕನ್ನಡ ಕಲಿಸುವವರಿಗೆ ಕಿವಿಮಾತಾಗಿ ಹಂಚಿಕೊಂಡಿದ್ದಾರೆ

ಕನ್ನಡ ಕಲಿಗಾಗಿ ಬರೆದ ಈ ವಿಶೇಷ ಲೇಖನದಲ್ಲಿ ೧೧ವಿಚಾರಗಳನ್ನು ಹರವಿದ್ದಾರೆ. ‘ನುರಿತ’ ಬರಹಗಾರರೂ ಸಾಮಾನ್ಯವಾಗಿ ಎಸಗುವ ಈ ಅನೇಕ ಪ್ರಮಾದಗಳನ್ನು ಕನ್ನಡ ಕಲಿಗಳು ಗಮನಿಸುವುದು ಅವಶ್ಯ. ಓದಿ ನೋಡಿ; ನಿಮ್ಮ ವಿಚಾರ ಏನು ಬರೆದು ತಿಳಿಸಿ.

ಕಲಕಿದ ನೀರು

ಕಲಕಿದ ನೀರು

ವಿಶ್ವೇಶ್ವರ ದೀಕ್ಷಿತ

೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು.

ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ, ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು.

ಕೆ.ಟಿ. ಗಟ್ಟಿ - ಕನ್ನಡದ ಬಂಗಾರ ಗಟ್ಟಿ

[ಹೊಸ ವಿಷಾದನೀಯ ಸುದ್ದಿ: ಜುಲೈ ೨೨, ೧೩೮ರಂದು ಜನಿಸಿದ, ಕೆ.ಟಿ.ಗಟ್ಟಿ ಅವರು ಫೆಬ್ರುವರಿ ೧೯, ೨೦೨೪ರಂದು ಮಂಗಳೂರಿನಲ್ಲಿ ತಮ್ಮ ೮೫ನೆ ವಯಸ್ಸಿನಲ್ಲಿ ನಿಧನರಾದರು.]