ನುಡಿ

Language

ಕನ್ನಡದ ಬಗ್ಗೆ ಅಭಿರುಚಿ ಮೂಡುವಂತೆ ಮಾಡುವುದೇ ಕನ್ನಡದ ಅಭಿವೃದ್ಧಿ

ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಃ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ.

ಸಂಸ್ಕೃತಿ ಮತ್ತು ತನ್ನತನಗಳಿಗೆ ತಾಯ್ನುಡಿಯೆ ಮೂಲ

ವ್ಯವಹಾರ, ಪ್ರಯಾಣ, ಶಾಲೆ, ಮತ್ತಿತ್ತರ ನಿತ್ಯ ಅವಶ್ಯಕತೆಗಳಿಗೆ ಒಂದೆ ಭಾಷೆಯ ಮೇಲಿನ ನಮ್ಮ ಅವಲಂಬನ ಎಷ್ಟಿದೆಯೆಂದರೆ ಬೇರೆ ಭಾಷೆಗಳ ಪರಿಚಯ ಕೂಡ ಅಪ್ರಾಸಂಗಿಕ ಎನಿಸುತ್ತದೆ. ನಾನೇಕೆ ಕನ್ನಡ ಕಲಿಯಬೇಕು? ಕರ್ನಾಟಕದಲ್ಲೂ  ಇಂಗ್ಲಿಷ್ ಮಾತಾಡುತ್ತಾರಲ್ಲ! ಸುಮ್ಮನೆ ವೇಳೆ ಹಾಳಲ್ಲವೆ?

ಜಾಗತಿಕ ಭಾಷೆಯ ಪಟ್ಟದಿಂದ ಇಂಗ್ಲಿಷಿನ ಅಧಃಪತನ ಖಚಿತ – ತಜ್ಞರ ಅಭಿಪ್ರಾಯ

ಬ್ರಿಟಿಶ್ ಭಾಷಾತಜ್ಞ ನಿಕೊಲಸ್ ಓಸ್ತ್ಲರ್ ಪ್ರಕಾರ, ಜಾಗತಿಕ ಮಾಧ್ಯಮ ಭಾಷೆಯಾಗಿ ಇಂಗ್ಲಿಷ್ ಮುಂದುವರೆಯುವ ದಿನಗಳ ಎಣಿಕೆ ಆರಂಭವಾಗಿದೆ. ಒಂದಾನೊಂದು ಕಾಲದಲ್ಲಿ ಅಂತಾರಾಷ್ಟ್ರೀಯ ಭಾಷೆಗಳಾದ ಅರಮೇಯಿಕ್, ಫಿನೀಷಿಯನ್, ಮತ್ತು ಪರ್ಷಿಯನ್ ಗಳಂತೆ ಇಂಗ್ಲಿಷ್ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ.

ಕನ್ನಡದ ಅಭಿವೃದ್ಧಿಗೆ ತೊಡಕಾಗಿರುವವರು ಯಾರು?

“ರಾಜ್ಯೋತ್ಸವ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು. ಈ ಆಚರಣೆಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಸ್ಥಿತಿ ಎಲ್ಲಿಗೆ ತಲುಪಿದೆ. ಇದಕ್ಕೆ ಯಾರು ಕಾರಣ, ನಮ್ಮ ಭಾಷೆಯ ಏಳ್ಗೆಗೆ ಪರಿಹಾರವೇನು ಎಂದು ನಾವು ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿರುವುದು."