ನುಡಿ

Language

ಕನ್ನಡ ಮತ್ತು ವಿಜ್ಞಾನದ ಕಲಿಕೆ

[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ‌ ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]

(ಇ + ಅ)ಷ್ಟು = ಎಷ್ಟು? ಮೂಲ ಸಂಸ್ಕೃತವೋ ಕನ್ನಡವೋ?

ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಕಿಟ್ಟೆಲ್ ಕೋಶದಲ್ಲಿ ೧೨ನೆ  ಶತಮಾನದ ಶಬ್ದಮಣಿದರ್ಪಣ ಮತ್ತು ಬಸವಪುರಾಣಗಳನ್ನು ಉಲ್ಲೇಖಿಸಲಾಗಿದೆ.   ಆದರೆ, ಕವಿರಾಜ ಮಾರ್ಗ, ಪಂಪ, ಮತ್ತು ರನ್ನರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ. ಇದಕ್ಕೆ ಏನಾದರೂ  ಸುಲಭ ವಿವರಣೆ ಇದ್ದರೆ ನನಗೆ ಹೊಳೆಯುತ್ತಿಲ್ಲ. 

ಉಗಾದಿಯೂ ಯುಗಾದಿಯೆ?

ಯುಗಾದಿಯಿಂದ ಉಗಾದಿ ಬಂತೆ? ಉಗಾದಿಗೆ ಒಂದು ಸ್ವತಂತ್ರ ಹುಟ್ಟು ಇದೆಯೆ? ಭಾಷೆ ಬೆಳೆಯುವುದದಾದರೂ ಹೇಗೆ?
... ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು  ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!

ಭಾಷೆಯ ಕಲಿಕೆ

ಒಂದು ಹೊಸ ಭಾಷೆ ಕಲಿಯಲು ಅಥವಾ ಕಲಿಸಲು ಯಾವ ದಾರಿ ಉತ್ತಮ? ನಿಗದಿತವಾಗಿ ಪೂರ್ವಾಯೋಜಿತವಾದ 'ಪಾಠ'ಗಳ ಮೂಲಕ ವ್ಯವಸ್ಥಿತವಾಗಿ (organized, formal, step-by- step method) ಕಲಿಯು(ಸು)ವುದೋ? ಇಲ್ಲವೇ ಅನಿಶ್ಚಿತವಾಗಿ ಅಲ್ಲಲ್ಲಿ ಪ್ರಯೋಗದಲ್ಲಿ ಕಂಡುಬರುವ ಅಂಶಗಳನ್ನು ಬಂದಬಂದ ಹಾಗೆ ಅಳವಡಿಸಿಕೊಳ್ಳುತ್ತ ಕಲಿಯು(ಸು)ವುದು (random, ad-hoc method) ವಾಸಿಯೋ? ಯಾವ ವಿಧಾನ ಹೆಚ್ಚು  ಪರಿಣಾಮಕಾರಿ?

ಬಾವುಟ

ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ  ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ

ಕನ್ನಡ ರಾಯಭಾರಿ - ಪ್ರಕಾಶ ಭಂಡಾರಿ

ಹೊರನಾಡಿನಲ್ಲಿರುವ ಕನ್ನಡ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತ, ಕನ್ನಡ ಸಂಸ್ಕೃತಿಯ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ವರ್ಷ ೨೦೦೦ ದಲ್ಲಿ ಕ್ಯಾಲಿಫೋರ್ನಿಯದ  ಅವೈನ್  ನಗರದಲ್ಲಿ ಕನ್ನಡ ಕಲಿ ಸಂಸ್ಥೆ ಮತ್ತು ಶಾಲೆಗಳು ಪ್ರಾರಂಭವಾದವು.  ನಂತರ, ಇದರಿಂದ ಪ್ರೇರಿತವಾಗಿ ಅಮೇರಿಕದ ತುಂಬ ಮತ್ತು  ಇತರೆಡೆ 'ಕನ್ನಡ ಕಲಿ' ಶಾಲೆ  ಮತ್ತು ಕಾರ್ಯಕ್ರಮಗಳು  ಹುಟ್ಟಿಕೊಂಡವು. ಇದು ನಿಮಗೆ ಗೊತ್ತಿರುವ ವಿಷಯ. 

ಸ್ವತಂತ್ರವಾಗಿ, ಇಂತಹದೆ ಕಳಕಳಿಯಿಂದ, ಮುಂಬಯಿ ನಗರದಲ್ಲಿ, 'ಚಿಣ್ಣರ ಬಿಂಬ' ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡ ಮತ್ತು ಕನ್ನಡ ಸಂಸ್ಕೃತಿಗಾಗಿ ಮೌನವಾಗಿ ದುಡಿಯುತ್ತ  ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಪ್ರಕಾಶ ಭಂಡಾರಿ.  ಇವರ ಕಾರ್ಯ ವೈಖರಿ ಮತ್ತು ಸಾಧನೆಗಳು ಹೊರನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ನಮ್ಮೆಲ್ಲರಿಗೂ ಆದರ್ಶಪ್ರಾಯ.   ಕನ್ನಡ ಕಲಿಗಳೆ, ಇವರನ್ನು ನಾವು ಅಭಿನಂದಿಸುವುದಷ್ಟೇ ಅಲ್ಲ, ಅನುಕರಿಸುವುದೂ ಅಗತ್ಯ.

ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ?

"ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ" ಎಂದು ಮಹಾಕವಿ ರನ್ನ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ರನ್ನ ಅಷ್ಟೇ ಅಲ್ಲ, ಕವಿರಾಜಮಾರ್ಗದ ಶ್ರೀವಿಜಯನಿಂದ ಕುಮಾರವ್ಯಾಸನ ವರೆಗೂ ಎಲ್ಲ ಕವಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇದೇ ಪರಂಪರೆ ನವೋದಯ, ನವ್ಯ ಸಾಹಿತ್ಯದಲ್ಲೂ ನಡೆದು ಈಗಲೂ ಮುಂದುವರೆಯುತ್ತಲಿದೆ. 

ನಾನೇಕೆ ಉಗಾದಿಯ ಶುಭಾಶಯ ಹೇಳುವುದಿಲ್ಲ!

ನಸು ಬಿನದ ಬರಹ (ಬಿತ್ತರಿಕೆ)

ಈ ದಿನ, ಮೃಷ್ಟಾನ್ನ ಭೋಜನ ಮಾಡಿ, ಸೊಂಪಾಗಿ ತಾಂಬೂಲ ಜಗಿದು, ಎಲ್ಲರಿಗೂ ಉಗಿದುಗಿದು, ನಿಮ್ಮ ಬಾಯಲ್ಲಿ ತಯಾರಾದ, ಶುಭಾಶಯದ ಗಿರ್ಮಿಟ್ಟನ್ನು ಯಥೇಚ್ಛವಾಗಿ ಥೂಂತುರಿಸಲು ಯಾರ ಪರ್ಮಿಟ್ಟೂ ಬೇಕಿಲ್ಲ.